ಮೊಹಮ್ಮದ್ ಇರ್ಫಾನ್ (ಜನನ ೬ ಜೂನ್ ೧೯೮೨) ಒಬ್ಬ ಪಾಕಿಸ್ತಾನದ ಎಡಗೈ ಮಧ್ಯಮವೇಗದ ಬೋಲರ್; ಇವರ ಜನ್ಮಸ್ಥಳ ಪಂಜಾಬ್. ಅವರ ಎತ್ತರ ೭ ಅಡಿ ೧ ಇಂಚ್ ಇದೆ ಎಂದು ಹೇಳಲಾಗಿದ್ದು, ಅದು ನಿಜವಾಗಿದ್ದಲ್ಲಿ ಇಂದಿನವರೆಗೆ ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದವರಲ್ಲಿ ಅವರೇ ಅತಿ ಎತ್ತರದ ವ್ಯಕ್ತಿಯಾಗುತ್ತಾರೆ. == ಮರಳಿ ಕ್ರಿಕೆಟ್ ಗೆ == ಅವರು ತಮ್ಮ ೨೭ ಬೆಯ ವಯಸ್ಸಿನಲ್ಲಿ, ತಡವಾಗಿಯಾದರೂ,ಕ್ರಿಕೆಟ್ ರಂಗಕ್ಕೆ ಮರುಪ್ರವೇಶ ಮಾಡಲು ಸಾಧ್ಯವಾಗಲು ಕಾರಣರಾದವರೆಂದರೆ ಪಾಕಿಸ್ತಾನದ ಮಾಜಿ ವೇಗದ ಬೋಲರ್ ಗಳಾದ ನದೀಮ್ ಇಕ್ಬಾಲ್, ಮತ್ತು ಅಕೀಬ್ ಜಾವೇದ್ ಹಾಗೂ ಪಾಕಿಸ್ತಾನಿ ಅಭಿಮಾನಿಗಳ ಜಾಲತಾಣ .. ಲಾಹೋರ್ ನ ಎನ್ ಸಿ ಎ ಯಲ್ಲಿ ಮೊಹಮ್ಮದ್ ಇರ್ಫಾನ್ ತರಬೇತಿ ಪಡೆಯುತ್ತಿದ್ದಾಗ ಅವರನ್ನು ಕೆಲವು ಕ್ರಿಕೆಟ್ ಅಭಿಮಾನಿಗಳು ಪ್ರಾಯೋಜಿಸಿದರು. ಈ ಅಭಿಮಾನಿಗಳು ಈಗ . ಮತ್ತು . ಜಾಲತಾಣಗಳಲ್ಲಿದ್ದಾರೆ. == ಮೊದಲ ದರ್ಜೆ ಕ್ರಿಕೆಟ್ == ಎನ್ ಸಿ ಎ ಯಲ್ಲಿ ತನ್ನ ತರಬೇತುದಾರರನ್ನು ಮೆಚ್ಚಿಸಿದ ಇರ್ಫಾನ್ ಗೆ ಹಬೀಬ್ ಬ್ಯಾಂಕ್ ಮತ್ತು ಒಳಗೊಂಡಂತೆ ಹಲವಾರು ಮೊದಲ ದರ್ಜೆ ತಂಡಗಳಿಂದ ತಮ್ಮ ತಂಡವನ್ನು ಸೇರಲು ಆಹ್ವಾನಗಳು ಬಂದವು. ಆದರೆ ನ ಆರಂಭ ಆಟಗಾರರಾದ ಅಝಾರ್ ಆಲಿಯವರು ನ ತರಬೇತುದಾರ ರಷೀದ್ ಇಕ್ಬಾಲ್ ರಿಗೆ ಇರ್ಫಾನ್ ರ ಸಾಮರ್ಥ್ಯದ ಬಗ್ಗೆ ಮನದಟ್ಟು ಮಾಡಿಸಿ ಇರ್ಫಾನ್ ಗೆ ಖಾನ್ ರಿಸರ್ಚ್ ಲೆಬಾರೇಟರೀಸ್ () ನಲ್ಲಿ ಒಂದು ಅವಕಾಶ ನೀಡಲು ಒಪ್ಪಿಸಿದರು. ಪಾಕಿಸ್ತಾನ್ ತಂಡದ ವಿರುದ್ಧ ಇರ್ಫಾನ್ ೪ ವಿಕೆಟ್ ಪಡೆದದ್ದನ್ನು ಕಂಡಿದ್ದ ಅಝರ್ ಆ ಕೂಡಲೆ ಗೆ ಫೋನಾಯಿಸಿ ಇರ್ಫಾನ್ ತಮ್ಮ ತಂಡಕ್ಕೆ ಒಳ್ಳೆಯ ಸೇರ್ಪಡೆ ಆಗುವರೆಂದು ತಿಳಿಸಿದರು. ಇರ್ಫಾನ್ ರ ಸಾಮರ್ಥ್ಯವನ್ನು ಪರಿಶೀಲಿಸಲ್ಪಟ್ಟು, ಅವರು ಆಯ್ಕೆಯಾದರು; ಅವರ ಕನಸಿನ ಮೊದಲ ಭಾಗ ನನಸಾಯಿತು. ಅಕ್ಟೋಬರ್ ೨೦೦೯ ರಲ್ಲಿ ನಡೆದ ಟ್ರೋಫಿಯಲ್ಲಿ ಖಾನ್ ರಿಸರ್ಚ್ ಲೆಬಾರೇಟರೀಸ್ ಅನ್ನು ಪ್ರತಿನಿಧಿಸುವುದರ ಮೂಲಕ ಇರ್ಫಾನ್ ಪ್ರಥಮ ದರ್ಜೆ ಕ್ರಿಕೆಟ್ ಗೆ ಪ್ರವೇಶ ಮಾಡಿದರು. ಬಹಳ ರನ್ ಗಳನ್ನು ಪೇರಿಸಲಾದ ಈ ಪಂದ್ಯದಲ್ಲಿ ಇರ್ಫಾನ್ ಮಿತವಾಗಿ ರನ್ ನೀಡಿದರಾದರೂ ಯಾವುದೇ ವಿಕೆಟ್ ಪಡೆಯುವುದರಲ್ಲಿ ಯಶಸ್ವಿಯಾಗಲಿಲ್ಲ. ತಮ್ಮ ಎರಡನೆಯ ಪಂದ್ಯದ ಎರಡನೆಯ ಇನಿಂಗ್ಸ್ ನಲ್ಲಿ ಇರ್ಫಾನ್ ೧೧೩ ರನ್ ಇತ್ತು ೭ ವಿಕೆಟ್ ಪಡೆದರು ಹಾಗೂ ಪಂದ್ಯದಲ್ಲಿ ಒಟ್ಟಾರೆ ೯ ವಿಕೆಟ್ ಪಡೆದರು. ವೃತ್ತಿಪರ ಕ್ರಿಕೆಟ್ ನಲ್ಲಿ ಅವರು ಪಡೆದ ಮೊದಲ ವಿಕೆಟ್ ಕಿರಿಯ ಪಾಕಿಸ್ತಾನಿ ಅಂತರರಾಷ್ಟ್ರೀಯ ಬ್ಯಾಟ್ಸ್ ಮನ್ ಆದ ಅಹ್ಮದ್ ಷೆಹ್ಝಾದ್ ರದ್ದಾಗಿತ್ತು. ಅವರು ಇಮ್ರಾನ್ ಫರ್ಹಾತ್ ರ ವಿಕೆಟ್ ಅನ್ನೂ ಪಡೆದರಲ್ಲದೆ ಹಸನ್ ರಾಝಾರಿಗೆ ಬೌನ್ಸರ್ ಹಾಕುವ ಮೂಲಕ ಪೆಟ್ಟು ನೀಡಿ, ನಂತರ ಅವರು ವಿಕೆಟ್ ಅನ್ನೂ ಪಡೆದರು. ತಮ್ಮ ಮೊದಲ ದರ್ಜೆಯ ಕ್ರಿಕೆಟ್ ನ ಆರಂಭದಲ್ಲಿ ಇರ್ಫಾನ್ ವಿಶ್ವಾಸಾರ್ಹವಾಗಿ ಆಡುವುದನ್ನು ಮುಂದುವರಿಸಿದರು. ತಮ್ಮ ಮೂರನೆಯ ಪಂದ್ಯದಲ್ಲಿ ೧೧ ವಿಕೆಟ್ ಕಬಳಿಸುವುದರ ಮೂಲಕ ತಮ್ಮ ತಂಡವು ಚಾಂಪಿಯನ್ ಶಿಪ್ ನ ಮೊದಲ ಗೆಲುವನ್ನು ಕಾಣಲು ನೆರವಾದರು. ಅವರು ಮೊದಲ ಇನಿಂಗ್ಸ್ ನಲ್ಲಿ ೫/೨೭ ಮತ್ತು ಎರಡನೆಯ ಇನಿಂಗ್ಸ್ ನಲ್ಲಿ ೬/೯೬ ಬೋಲಿಂಗ್ ವಿಕ್ರಮವನ್ನು ಸಾಧಿಸಿದರು. ಮೊದಲ ದರ್ಜೆ ಕ್ರಿಕೆಟ್ ಆಡಲು ಆಕರ್ಷಕವಾದ ಥೈಲಿಯನ್ನು ನೀಡುವುದಕ್ಕೆ ಮುನ್ನ ಅವರು ಈ ಕ್ರೀಡೆಯನ್ನೇ ತೊರೆಯುವ ಯೋಚನೆಮಾಡಿದ್ದರು ಹಾಗೂ ಒಂದು ಪ್ಲಾಸ್ಟಿಕ್ ಪೈಪ್ ಕಂಪನಿಯಲ್ಲಿ ಉದ್ಯೋಗದಲ್ಲಿ ತೊಡಗಿದ್ದರು. ಅವರ ಎತ್ತರವು ಸುಮಾರು ೬'೧೦ ಎಂದಿದ್ದರೂ ಅವರ ನಿರ್ದಿಷ್ಟ ಎತ್ತರ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಕ್ರಿಕೆಟ್ ಜಗತ್ತಿನ ಸರ್ವಕಾಲಿಕ ಆಟಗಾರರ ಪೈಕಿ ಇವರಷ್ಟು ಎತ್ತರ ಇರುವ ಮತ್ತೊಬ್ಬ ಏಕೈಕ ಆಟಗಾರರೆಂದರೆ ವಿನ್ ಜೆಫರ್ಸನ್. ಇರ್ಫಾನ್ ನಡೆದುಬಂದ ದಾರಿಯನ್ನು ಸವಿವರವಾಗಿ ಹೊಂದಿರುವಂತಹ ಜಾಲತಾಣವೇ . 2011-07-26 ವೇಬ್ಯಾಕ್ ಮೆಷಿನ್ ನಲ್ಲಿ. ಜನಪ್ರಿಯ ಸಾಮಾಜಿಕ ಅಂತರ್ಜಾಲವಾದ ಫೇಸ್ ಬುಕ್ ನಲ್ಲಿ ಇರ್ಫಾನ್ ರ 'ಅಭಿಮಾನಿಗಳ ಪುಟ' ಇದೆ ಹಾಗೂ . 2011-07-08 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಅಭಿಮಾನಿಗಳ ಒಂದು ಬ್ಲಾಗ್ ಇದ್ದು ಅದರಲ್ಲಿ ಇರ್ಫಾನ್ ರ ಕ್ರಿಕೆಟ್ ಸಾಧನೆಗಳ ವಿವರಗಳನ್ನು ಕಾಲಕಾಲಕ್ಕೆ ನೀಡಲಾಗುತ್ತದೆ. == ಐಪಿಎಲ್ - ಕೋಲ್ಕತ್ತಾ ನೈಟ್ ರೈಡರ್ಸ್ (೨೦೧೧-) == ೨೦೧೧ ಐಪಿಎಲ್ ಅವಧಿಯಲ್ಲಿ ತಾನು ಕೋಲ್ಕತ್ತಾ ನೈಟ್ ರೈಡರ್ಸ್ () ಪರವಾಗಿ ಆಡಲು ಒಂದು ಒಪ್ಪಂದದ ಕರಾರಿಗೆ ರುಜು ಹಾಕಿರುವುದಾಗಿ ಇರ್ಫಾನ್ ಘೋಷಿಸಿದರು. ಮತ್ತು ತಮ್ಮ ಒಪ್ಪಿಗೆ ನೀಡಿದರೆ ಮಾತ್ರ ಈ ಒಪ್ಪಂದವು ಊರ್ಜಿತವಾಗುತ್ತದೆ. ತಂಡದೊಡನೆ ಇರ್ಫಾನ್ ಆಡಲು ಒಂದು ಅವಕಾಶ ನೀಡಲು ಪ್ರಮುಖ ಕಾರಣವೆಂದರೆ ಪಾಕಿಸ್ತಾನದ ಮಾಜಿ ವೇಗದ ಬೋಲರ್ ಆದ ವಸೀಮ್ ಅಕ್ರಂ ವ್ಯವಸ್ಥಾಪಕರೊಡನೆ ಇವರ ಬಗ್ಗೆ ಆಡಿದ ಭರವಸೆಯ ಮಾತುಗಳು. ಈ ಕರಾರಿನ ಪ್ರಕಾರ ಇರ್ಫಾನ್ ತಾವು ಆಡುವ ಪ್ರತಿ ಪಂದ್ಯಕ್ಕೆ $೭೫,೦೦೦ ಗಳು ಹಾಗೂ ಹೆಚ್ಚುವರಿ $೨,೦೦೦ ಗಳಿಸುತ್ತಾರೆ. ಆದರೆ ಈ ಒಪ್ಪಂದವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯ ಅಂಗೀಕರಿಸಬೇಕು. ಇರ್ಫಾನ್ ರ ಈ ಒಪ್ಪಂದದ ಕರಾರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನ ಅನುಮೋದನೆಯೂ ಅವಶ್ಯವಾಗಿದೆ. == ಅಂತರರಾಷ್ಟ್ರೀಯ ಮಟ್ಟಕ್ಕೆ ಪ್ರವೇಶ (೨೦೧೦) == ಪಾಕಿಸ್ತಾನದ ತಂಡವು ೨೦೧೦ ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಬೆಟ್ಟಿಂಗ್ ಹಗರಣಕ್ಕೆ ಸಿಲುಕಿದ ಇಬ್ಬರು ಬೋಲರ್ ಗಳಾದ ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ಆಸಿಫ್ ರ ಬದಲಾಗಿ ಇರ್ಫಾನ್ ಆಡುವುದೆಂದು ಘೋಷಿಸಲಾಯಿತು.. ಇರ್ಫಾನ್ ಇಂಗ್ಲೆಂಡ್ ವಿರುದ್ಧ ೨೦೧೦ ರಲ್ಲಿ ಇಂಗ್ಲೆಂಡ್ ನಲ್ಲಿ ತಮ್ಮ ಮೊದಲ ಓಡಿಐ ಪಂದ್ಯವನ್ನು ಆಡಿದರು, ಆದರೆ ಮಳೆಯ ಕಾರಣ ಆ ಪಂದ್ಯವನ್ನು ೪೧ ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಅವರು ೫.೩ ಓವರ್ ಗಳನ್ನು ಬೋಲ್ ಮಾಡಿ ೩೭ ರನ್ ಇತ್ತು, ಯಾವುದೇ ವಿಕೆಟ್ ಪಡೆಯಲಿಲ್ಲ ಹಾಗೂ ಝೋಮು ಹಿಡಿದ ಕಾರಣ ಕ್ರೀಡಾಂಗಣದಿಂದ ಹೊರತೆರಳಿದರು. ಅವರು ನೀಡಿದ ೩೭ ರನ್ ಗಳ ಪೈಕಿ ೧೫ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಮೊದಲ ಓವರ್ ನಲ್ಲೇ ಇತ್ತರು. ನಂತರ ಇಂಗ್ಲೆಂಡ್ ಆ ಪಂದ್ಯವನ್ನು ೨೪ ರನ್ ಗಳ ಅಂತರದಿಂದ ಗೆದ್ದಿತು. == ಉಲ್ಲೇಖಗಳು‌ == == ಬಾಹ್ಯ ಕೊಂಡಿಗಳು‌ == ಅಂತರರಾಷ್ಟ್ರೀಯ ಓಡಿಐಗಳೆಗೆ ಮೊಹಮ್ಮದ್ ಇರ್ಫಾನ್ ರ ಸಮಯರೇಖೆ 2011-07-26 ವೇಬ್ಯಾಕ್ ಮೆಷಿನ್ ನಲ್ಲಿ. ಮೊಹಮ್ಮದ್ ಇರ್ಫಾನ್ ರ ಅಧಿಕೃತ ಫೇಸ್ ಬುಕ್ ಪುಟ ಮೊಹಮ್ಮದ್ ಇರ್ಫಾನ್ : ಕ್ರಿಕಿನ್ಫೋ ಆಟಗಾರನ ವ್ಯಕ್ತಿ ಚಿತ್ರಣ ರಷೀದ್ ಲತೀಫ್ ಕ್ರಿಕೆಟ್ ಅಕಾಡೆಮಿ 2006-12-05 ವೇಬ್ಯಾಕ್ ಮೆಷಿನ್ ನಲ್ಲಿ.